The story is a story - a tale of good luck-logo

The story is a story - a tale of good luck

Children's Topics & Stories

Kannada Stories for children.

Kannada Stories for children.

Location:

India

Description:

Kannada Stories for children.

Twitter:

@KKatheya

Language:

Kannada


Episodes

Ep111 - ಸೂರ್ಯ, ಚಂದ್ರ, ಮತ್ತು ಸಮುದ್ರಗಳ ಕತೆ

1/24/2021
ಸೂರ್ಯ ಚಂದ್ರರು ಒಂದು ಕಾಲದಲ್ಲಿ ನಮ್ಮ ನಿಮ್ಮ ಥರ ಭೂಮಿಯ ಮೇಲೆ ಇದ್ರಂತೆ . ! . ಆಶ್ಚರ್ಯ ಆಗುತ್ತಲ್ಲಾ ? ಹೌದು , ಸೂರ್ಯ ಚಂದ್ರರು ಮನುಷ್ಯರ ಥರ ಮನೆಯಲ್ಲಿ ಇರ್ತಿದ್ರು ಅಂತ ಆಫ್ರಿಕನ್ನರು ನಂಬುತ್ತಾರಂತೆ . ಹಾಗಾದ್ರೆ , ಈಗ್ಯಾಕೆ ಆಕಾಶದಲ್ಲಿ ಇರ್ತಾರೆ ? ತಿಳಿಯೋಕೆ , ಈ ಕತೆ ಕೇಳಿ .

Duration:00:05:11

Ep110 - ಸಿಡುಕ ಸಿದ್ದ ಹಾಗೂ ಗುಹೆಯ ಮನುಷ್ಯ

1/10/2021
ಸಿಡುಕ ಸಿದ್ದನಿಗೆ ಸಿಟ್ಟು ಎಷ್ಟು ಜಾಸ್ತಿಯೋ ಪೆದ್ದುತನ ಸ್ವಲ್ಪ ಅದಕ್ಕಿಂತ ಜಾಸ್ತಿ. ಈ ಕತೆಯಲ್ಲಿ ಸಿದ್ಧನಿಗೆ ಗುಹೆಯ ಮನುಷ್ಯನಿಂದ ಊಹಿಸಲಾರದಷ್ಟು ಐಶ್ವರ್ಯ ಸಿಕ್ಕರೂ, ಪಾಪ ಅದನ್ನು ಉಳಿಸಿಕೊಳ್ಳೋಲಾಗಲಿಲ್ಲ. ಹೇಗೆ, ಯಾಕೆ ಅನ್ನುವುದನ್ನು ಕತೆಯಲ್ಲಿ ಕೇಳೋಣ. ನಮಗೆ ಎಷ್ಟು ಅನುಭವ ಇದೆಯೋ ಅಷ್ಟೇ ದಕ್ಕುವುದು ಅನ್ನುವುದಕ್ಕೆ ಈ ಕತೆ ಉತ್ತಮ ಉದಾಹರಣೆ.

Duration:00:13:51

Repeat - ಪಾತ್ರೆ ಮರಿ ಇಟ್ಟ ಕತೆ

12/26/2020
ಕೇಳಿರೊಂದು ಕಥೆಯ ಸರಣಿಯ ಕತೆಗಳಲ್ಲಿ ನಾಸ್ರುದ್ದೀನ್ ಹೊಡ್ಜಾನ ಕತೆಗಳು ಅತಿ ಜನಪ್ರಿಯ. 2019 ರಲ್ಲಿ ಪ್ರಕಟವಾಗಿದ್ದ ಈ ಕತೆಯ ಮರು ಪ್ರಸಾರ . ನಾಸ್ರುದ್ದೀನ್ ಹೊಡ್ಜ ಪಕ್ಕದ ಮನೆಯವನ ಹತ್ತಿರ ಪಾತ್ರೆ ಸಾಲ ಪಡೆದು ವಾಪಸ್ ಕೊಡುವಾಗ ಪಾತ್ರೆ ಅಷ್ಟೇ ಅಲ್ದೆ ಅದರ 'ಮರಿ ' ಯನ್ನೂ ಹೇಗೆ ಕೊಡಲು ಸಾಧ್ಯ ? ಪಾತ್ರೆ ಎಲ್ಲಾದ್ರೂ ಮರಿ ಇಡುತ್ಯೆ ? ಆದರೆ ' ಕೊಟ್ಟೋನು ಕೋಡಂಗಿ! ಇಸ್ಕೊಂಡೋನು ಈರಭದ್ರ " ಅನ್ನೋ ಗಾದೆಯ ಹಾಗೆ , ಆ ಪಕ್ಕದ ಮನೆಯವನಿಗಾದ್ರೂ ಗೊತ್ತಾಗಬೇಡವೇ ? ಹೊಡ್ಜ ಯಾಕೆ ಹೀಗೆ ಮಾಡಿದ , ಮುಂದೇನಾಯ್ತು ಅನ್ನೋದನ್ನು ಈ ಕತೆಯಲ್ಲಿ ಕೇಳಿ .

Duration:00:06:39

Ep109 - ಹಸು ಮತ್ತು ನೊಣ

12/13/2020
ಹಸುಗಳಿಗೂ ಅವುಗಳ ಸುತ್ತ ಸದಾ ಜುಯ್ ಅಂತ ಸುತ್ತುವ ನೊಣಗಳಿಗೂ ಅದೇನೋ ವಿಚಿತ್ರ ಸಂಬಂಧ . ವೈಜ್ಞಾನಿಕವಾಗಿ ನೊಣಗಳಿಂದ ಕಣ್ಣಿನ ರೋಗ ( Pink Eye ) ಬರುವುದು ಸಹಜವಾದರೂ , ಆಫ್ರಿಕಾದ ಜಾನಪದ ಕತೆಗಳ ಪ್ರಕಾರ ನೊಣಗಳು ತೊಂದರೆ ಕೊಡುವುದಕ್ಕೆ ಹಸುಗಳೇ ಕಾರಣವಂತೆ . !

Duration:00:07:27

Ep108 - ಬಾವಲಿಗಳು ರಾತ್ರಿಯಷ್ಟೇ ಹೊರಗೇಕೆ ಬರುತ್ತವೆ?

11/28/2020
ಬಾವಲಿ ( Bat ) ವಿಚಿತ್ರ ಹಾಗೂ ಕುತೂಹಲಕಾರಿ ಜೀವಿ . ಅತ್ತ ಪ್ರಾಣಿಯೂ ಅಲ್ಲದೆ , ಇತ್ತ ಹಕ್ಕಿಯೂ ಅಲ್ಲದ ಬಾವಲಿ ರಾತ್ರಿ ಅಷ್ಟೇ ಹೊರ ಬರುತ್ತವೆ . ವೈಜ್ಞಾನಿಕವಾಗಿ ಬಾವಲಿಗಳಿಗೆ ದೃಷ್ಟಿ ಅಷ್ಟು ಬಲವಾಗಿ ವೃದ್ಧಿಯಾಗಿಲ್ಲ , ಬದಲಾಗಿ Echo location , ಅಂದರೆ ಸೂಕ್ಷ್ಮ ಧ್ವನಿ ತರಂಗಗಳ ನೆರವಿನಿಂದ ದಾರಿ , ಊಟ ಹುಡುಕುತ್ತವೆ . ನೂರಾರು ವರ್ಷಗಳ ಹಿಂದೆ ಆಫ್ರಿಕಾದ ಜನರಿಗೆ ಈ ಬಾವಲಿ ರಾತ್ರಿಯಷ್ಟೇ ಹೊರಗೇಕೆ ಬರುತ್ತದೆ ಅನ್ನುವ ಪ್ರಶ್ನೆಗೆ ಸೊಗಸಾದ ಕತೆಯ ಮೂಲಕ ವಿವರಿಸಿದ್ದಾರೆ . ಕೇಳೋಣ ಬನ್ನಿ .

Duration:00:05:51

[ ವಿಶೇಷ ] - ದೀಪಾವಳಿ ಹಬ್ಬ

11/13/2020
ದೀಪಾವಳಿ ಹಬ್ಬದ ಶುಭಾಶಯಗಳು ಎಲ್ಲರಿಗೂ ಗೆಳೆಯರೇ . ದೀಪಾವಳಿ ಭಾರತೀಯರಿಗೆ ವಿಶೇಷ ಹಬ್ಬ . ಈ ಹಬ್ಬದ ಹಿಂದೆ ಬಹಳಷ್ಟು ಉಪಕತೆಗಳಿವೆ . ಈ ಕಂತಿನಲ್ಲಿ ಈ ಹಬ್ಬದ ಬಗ್ಗೆ ಮೂರು ಕತೆಗಳನ್ನು ಕೇಳೋಣ .

Duration:00:07:19

Ep107 - ಗುಡುಗು ಮತ್ತು ಸಿಡಿಲು

10/31/2020
ಗುಡುಗು , ಸಿಡಿಲು ಮಳೆಗಾಲದಲ್ಲಿ ಸರ್ವೇ ಸಾಮಾನ್ಯ . ಗುಡುಗು ಕೇಳುವ ಮೊದಲೇ ಸಿಡಿಲು ಕಾಣುವುದೂ ಸಾಮಾನ್ಯ . ಆದರೆ , ಸಾವಿರಾರು ವರ್ಷಗಳ ಹಿಂದೆಯೇ ಇದನ್ನು ಮನಗಂಡು ಗುಡುಗು , ಸಿಡಿಲಿನ ಸುತ್ತ ಹೆಣೆದಿರುವ ಈ ಕತೆ , ಸಿಡಿಲನ್ನು ಚೂಟಿ ಟಗರಿಗೂ , ಗೂಡುಗನ್ನು ಮಗನನ್ನು ಸರಿ ಹಾದಿಗೆ ತರುವ ಅಮ್ಮನಿಗೂ ಹೋಲಿಸುವ ಮೂಲಕ ಕೇಳುವುದಕ್ಕೆ ವಿಶಿಷ್ಟ ಅನುಭವ ಕೊಡುತ್ತದೆ . Thunder and Lightning are common phenomena. This folktale compare lightning to a mischievous Ram and the thunder as the mom that follows her son around scolding him for his mischiefs. A unique story.

Duration:00:06:39

Ep106 - ಸುಳ್ಳು ಹೇಳದಿರುವ ಮನುಷ್ಯ

10/17/2020
ಸುಳ್ಳು ಹೇಳುವುದು ಅಂದರೆ ಸಹಜ . ಅದರಲ್ಲೂ , ಕೆಲವರಿಗೆ ಸುಳ್ಳು ಹೇಳುವುದು ಚಟ ವಾಗಿ ಬಿಟ್ಟಿರುತ್ತದೆ . ಹಾಗಿರುವಾಗ , ಒಂದೂ ಸುಳ್ಳು ಹೇಳದೆ ಇರುವ ಮನುಷ್ಯ ಒಬ್ಬ ಬದುಕಿದ್ದ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಈ ಕತೆಯಲ್ಲಿ ಆ ಮನುಷ್ಯನನ್ನ ಭೇಟಿ ಮಾಡೋಣ . ಅವನಿಂದ ಸುಳ್ಳು ಹೇಳಿಸೋಕೆ ಪಾಡು ಪಟ್ಟ ರಾಜನ ಬಗ್ಗೆಯೂ ಕೇಳೋಣ

Duration:00:06:23

Ep105 - ಸಿಂಹವನ್ನು ಸೋಲಿಸಿದ ತೋಳ ( ಉತ್ತರ ಕರ್ನಾಟಕ ಶೈಲಿ)

10/11/2020
ಕಳೆದ ವಾರ ಇದೇ ಕತೆಯ ಸರಳ ಗನ್ನಡ ಅವತರಣಿಕೆ ( version ) ಅನ್ನು ಮಾಡಿದ್ದೆವು . ಈ ವಾರ , ಜೈರಾಜ್ ಗಲಗಲಿ ಅವರು ಈ ಕತೆಯನ್ನು ಉತ್ತರ ಕರ್ನಾಟಕ ಶೈಲಿ ಒಳಗ ಹೇಳಿದ್ದಾರೆ . ನೀವೂ , ನಾವೂ ಕೇಳಿ ಮಜಾ ತಗಳ್ಳೋಣಾಂತ ? ಏನಂತೀರಿ ?

Duration:00:06:47

Ep104 - ಸಿಂಹವನ್ನು ಸೋಲಿಸಿದ ತೋಳ

10/3/2020
ಪಂಚತಂತ್ರದ ಕತೆಗಳಲ್ಲಿ ನರಿ ಬುದ್ದಿವಂತಿಕೆ ಹಾಗೂ ಕಪಟತನಕ್ಕೆ ಹೆಸರುವಾಸಿ . ಆಫ್ರಿಕಾದ ಜಾನಪದ ಕತೆಗಳಲ್ಲಿ ತೋಳಕ್ಕೆ ನರಿಯ ಸ್ಥಾನ . ಈ ಕತೆಯಲ್ಲಿ ಹಿಂದೆ ತೋಳದಿಂದ ಆದ ಮೋಸ ಮರೆಯದ ಸಿಂಹಕ್ಕೆ ತೋಳ ಮತ್ತೆ ಸಿಕ್ಕಿ ಬೀಳುತ್ತದೆ . ತೋಳ ಸಿಂಹದಿಂದ ಪಾರು ಹೇಗೆ ಆಗುತ್ತದೆ ಅನ್ನುವುದನ್ನು ಕೇಳೋಣ .

Duration:00:06:23

Ep103 - ಸೋರೆಕಾಯಿ ಮಕ್ಕಳು( The Calabash Kids )

9/27/2020
ಆಫ್ರಿಕಾದಲ್ಲಿ ತಮಟೆಯ ಆಕಾರದಲ್ಲಿರೋ ಸೋರೆಕಾಯಿ ಸಿಗುತ್ತದೆ . ಸೋರೆಕಾಯಿಯ ಉಪಯೋಗ ಕೂಡ ಹತ್ತು ಹಲವು ರೀತಿಯಲ್ಲಿ . ಅಡುಗೆಯಂತೂ ಹೌದು , ಆದರೆ ಅಲ್ಲಿನ ಜನರು ಸೋರೆಕಾಯಿಯನ್ನು ಒಣಗಿಸಿ , ತಿರುಳು ತೆಗೆದು , ಅದನ್ನು ನೀರು ತುಂಬುವ ಬಿಂದಿಗೆಯಾಗಿ , ಸಾಮಗ್ರಿ ತುಂಬಿಡುವ ಪಾತ್ರೆಯಾಗಿ ಉಪಯೋಗಿಸುತ್ತಾರೆ . ಈ ಸೋರೆಕಾಯಿಯ ಬಗ್ಗೆ ಕೂಡ ಜನಪದ ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವೇ . ಈ ಕತೆಯಲ್ಲಿ , ಮಕ್ಕಳಿಲ್ಲದ ಹೆಣ್ಣು ಮಗಳಿಗೆ ಸೋರೆಕಾಯಿಯ ಬೀಜಗಳಿಂದ ಮಕ್ಕಳು ಹುಟ್ಟಿದ ರೋಚಕ ಕತೆ ಕೇಳೋಣ .

Duration:00:10:24

Ep102 - ಹಕ್ಕಿಗಳ ರಾಜ ಯಾರು ?

9/20/2020
ಹಕ್ಕಿಗಳಿಗೆ ಸಿಂಹ ನಂತೆ ರಾಜ ಒಬ್ಬನಿದ್ದರೆ ಹೇಗಿರ್ತಿತ್ತು ಅನ್ನುವ ಪ್ರಶ್ನೆಯನ್ನು ಕತೆಯ ರೂಪದಲ್ಲಿ ಸೊಗಾಸಾಗಿ ವಿವರಿಸುತ್ತದೆ ಈ ಕತೆ

Duration:00:09:20

Ep101 - ಕತೆಗಳು ಹೇಗೆ ಹುಟ್ಟಿದವು?

9/13/2020
ಆಫ್ರಿಕಾದ ಜಾನಪದ ಕತೆಗಳು ಮನುಷ್ಯ ತನ್ನ ಸುತ್ತ ಮುತ್ತಲಿನ ಪ್ರಾಣಿ , ಪಕ್ಷಿ , ಪರಿಸರವನ್ನು ಅರ್ಥ ಮಾಡಿಕೊಂಡ ಬಗೆಯನ್ನು ತಮ್ಮದೇ ರೀತಿಯಲ್ಲಿ ಹಿಡಿದಿಡುತ್ತವೆ . ಆದರೆ , ಈ ಕತೆಗಳು ಹೇಗೆ ಹುಟ್ಟಿದವು ಅನ್ನುವುದಕ್ಕೂ ಒಂದು ಕತೆ ಇದೆ ಅಂದರೆ ಆಶ್ಚರ್ಯ ಆಗುತ್ತೆ ಅಲ್ವಾ ? ಹೆಚ್ಚು ತಿಳಿಯಲು ಈ ವಾರದ ಕತೆ ಕೇಳಿ .

Duration:00:10:23

Ep100 - ಅನಾಂಸಿ ಮತ್ತು ಮಾಯಾ ಮಡಿಕೆ

9/5/2020
"ಆಫ್ರಿಕಾದ ಜಾನಪದ ಕತೆಗಳು " ಮಾಲಿಕೆಯಲ್ಲಿ ಈ ಕತೆ ಮೊದಲನೆಯದು . ಒಟ್ಟು ನಾವು ಮಾಡಿದ ಕತೆಗಳಲ್ಲಿ ಒಂದು ನೂರನೆಯದು ಕೂಡ . ಮತ್ತೊಂದು ವಿಶೇಶ - ಈ ಕತೆ ಖ್ಯಾತ ಗಾಯಕಿ , ಕಲಾವಿದೆ ಶ್ರೀಮತಿ ಎಂ ಡಿ ಪಲ್ಲವಿ ಅವರ ನಿರೂಪಣೆ . ಅನಾಂಸಿ ಅನ್ನುವ ಜೇಡರ ಹುಳು ಪ್ರಪಂಚದ ವಿವೇಕ , ಬುದ್ದಿ ಶಕ್ತಿಯನ್ನೆಲ್ಲ ಒಟ್ಟು ಮಾಡಿ ಮಡಿಕೆಯಲ್ಲಿ ಕೂಡಿಟ್ಟು ಕೊಂಡಾಗ ಆಗಿದ್ದೇನು ? ಮುಂದಿನದನ್ನು ಪಲ್ಲವಿಯವರ ದನಿಯಲ್ಲೇ ಕೇಳಿ .

Duration:00:06:15

Ep99 - ನಿದ್ರೆ ಬರದಿದ್ದ ರಾಜ

8/29/2020
ಈ ಸಲದ ಕತೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ರಾಜನೊಬ್ಬನ ಕತೆ . ರಾಜನಿಗೆ ಏನು ಮಾಡಿದರೂ ರಾತ್ರಿ ನಿದ್ರೆ ಬರುತ್ತಿರಲಿಲ್ಲ . ಎಷ್ಟೇ ಮದ್ದು , ಗುಳಿಗೆ ತಿಂದರೂ , ವ್ರತ , ದಾನ ಮಾಡಿದರೂ ನಿದ್ರೆ ಮಾತ್ರ ದೂರವೇ ಉಳಿದಿತ್ತು . ಅಷ್ಟೆಲ್ಲ ಕಷ್ಟ ಪಟ್ಟರೂ ಗುಣವಾಗದ ರಾಜನ ನಿದ್ರೆ ಖಾಯಿಲೆಯನ್ನ ಒಬ್ಬ ಸಾಮಾನ್ಯ ಮರ ಕಡಿಯುವವ ಗುಣ ಪಡಿಸಿದ್ದು ಹೇಗೆ . ? "ಮಂಗ್ಯಾ , ಮೊಸಳಿ ಕತಿ " ಆದಮೇಲೆ ಉತ್ತರ ಕರ್ನಾಟಕ ಶೈಲಿಯಲ್ಲಿ ನಿರೂಪಿಸಿರುವ ಎರಡನೇ ಕತೆ ಇದು .

Duration:00:12:47

Repeat - ಶಮಂತಕ ಮಣಿಯ ಕತೆ

8/22/2020
ಈ ಕಂತು ೨೦೧೯ ರ ಗಣೇಶ ಹಬ್ಬದ ಸಮಯದಲ್ಲಿ ಮಾಡಿದ ಕತೆ . ಈ ವರ್ಷದ ಗೌರಿ ಗಣೇಶ ಹಬ್ಬಕ್ಕೆ ಶಮಂತಕ ಮಣಿಯ ಕತೆ .

Duration:00:50:07

Ep98 - ಸಿಂಹವನ್ನು ಸೋಲಿಸಿದ ಮೊಲದ ಕತೆ

8/8/2020
ಏನು ? ಸಿಂಹದಂಥ ಬಲಿಷ್ಠ ಪ್ರಾಣಿ ಎಲ್ಲಿ ? ಮೊಲದಂಥ ಪೀಚು ಪ್ರಾಣಿ ಎಲ್ಲಿ ? ಆದರೂ ಸಿಂಹದ ಶಕ್ತಿಯ ಮುಂದೆ ಮೊಲದ ಯುಕ್ತಿಯೇ ಮೇಲಾಯಿತು . ಒಂದೊಂದು ಸಲ ನಮ್ಮ ಮುಂದೆ ಕೆಟ್ಟದ್ದು ನಡೆಯುತ್ತಿದ್ದರೂ , ಅಸಹಾಯಕರಾಗುವುದು ಸಹಜ . ಅದರಲ್ಲೂ ಎದುರಾಳಿ ಬಲಿಷ್ಠನಾಗಿದ್ದರಂತೂ , ಇನ್ನೇನು ಎಲ್ಲ ಮುಗಿದೇ ಹೋಯಿತು ಅನ್ನಿಸುವಾಗ , ಈ ಕತೆ ಸ್ಫೂರ್ತಿ ಕೊಡುತ್ತದೆ .

Duration:00:06:54

Ep97 - ಟೋಪಿ ಮಾರುವವ ಹಾಗೂ ಮಂಗಗಳು

8/1/2020
" ಟೋಪಿ ಬೇಕಾ ಟೋಪಿ " ಅಂತ ಕೂಗುತ್ತಾ ಬರುವ ಟೋಪಿ ಮಾರುವವನ ಕತೆ ಶಾಲೆಗಳಲ್ಲಿ ನಾಟಕದ ರೂಪದಲ್ಲೋ , ಪಠ್ಯದಲ್ಲೋ ನೋಡದವರು ಕಡಿಮೆ . ಈಗ ಈ ಕತೆಯನ್ನು ಈಗಿನ ಪುಟಾಣಿಗಳೂ ಕೇಳಬಹುದು . ಟೋಪಿ ಮಾರುವವನ ಟೋಪಿಗಳನ್ನು ಚೇಷ್ಟೆ ಮಂಗಗಳು ಹೊತ್ತುಕೊಂಡು ಮರದ ಮೇಲೆ ಹತ್ತಿ ಕುಳಿತಾಗ ಟೋಪಿ ಮಾರುವವ ವಾಪಸ್ ಪಡೆಯೋದಕ್ಕೆ ಏನೆಲ್ಲಾ ಸಾಹಸ ಮಾಡಬೇಕಾಯ್ತು ಅನ್ನುವುದನ್ನು ಈ ಕತೆ ತಿಳಿ ಹಾಸ್ಯದೊಂದಿಗೆ ಹೇಳುತ್ತದೆ .

Duration:00:03:27

Ep96 - ಬಾಯಿಬಡುಕ ಆಮೆ ಮತ್ತು ಬಾತುಕೋಳಿಗಳು

7/25/2020
ಮಾತು ಹಿತ , ಮಿತವಾಗಿರಬೇಕು ಅನ್ನುತ್ತಾರೆ . ಜತೆಗೆ ಸಮಯೋಚಿತವಾಗಿರಬೇಕು ಕೂಡ . ಸಲ್ಲದ ಜಾಗದಲ್ಲಿ ಬೇಡ ಮಾತುಗಳಾಡಿದರೆ ತೊಂದರೆ ತಪ್ಪಿದ್ದಲ್ಲ ಅನ್ನುವುದಕ್ಕೆ ಈ ಕತೆ ಒಳ್ಳೆಯ ಉದಾಹರಣೆ . ಸಹಾಯ ಬೇಕಾಗಿದ್ದ ಆಮೆಯೊಂದಕ್ಕೆ , ಬಾತುಕೋಳಿಗಳು ಸಹಾಯ ಮಾಡುವುದಕ್ಕೆ ಮೊದಲು ಒಂದು ಷರತ್ತು ಹಾಕಿದವು . ಆಮೇಲೆ ಏನಾಯ್ತು ಅನ್ನೋದನ್ನ ಕತೆಯಲ್ಲಿ ಕೇಳಿ .

Duration:00:07:22

Ep95 - ಪಾರಿವಾಳ ಮತ್ತು ಇರುವೆಯ ಕತೆ

7/19/2020
ಉಪಕಾರ ಮಾಡಿದವರನ್ನು ಇಂದಿಗೂ ಮರೆಯಬಾರದು ಅಂತ ಗಾದೆಯ ಹಾಗೆ , ಪುಟ್ಟ ಇರುವೆಯೂ , ದೊಡ್ಡ ಪಾರಿವಾಳವೂ ಒಬ್ಬರಿಗೊಬ್ಬರು ಉಪಕಾರ ಮಾಡಿದ್ದು ಹೇಗೆ . ? ಪುಟ್ಟ ಇರುವೆಯಿಂದ ದೊಡ್ಡ ಪಾರಿವಾಳಕ್ಕೆ ಆದ ಉಪಕಾರವಾದರೂ ಏನು . ? ಬನ್ನಿ, ಈ ಕತೆಯಲ್ಲಿ ತಿಳಿದುಕೊಳ್ಳೋಣ .

Duration:00:04:17