Sandhyavani
Kids & Family Podcasts
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Location:
India
Genres:
Kids & Family Podcasts
Description:
A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.
Language:
Kannada
Contact:
6364593790
Episodes
S3 : EP - 71 : ಮಹಾ ಯುದ್ಧದ ವ್ಯೂಹ | Mahabharata war
9/6/2024
S3 : EP - 71 : ಮಹಾ ಯುದ್ಧದ ವ್ಯೂಹ | Mahabharata war
ಮಹಾಯುದ್ಧಕ್ಕೆ ಪೂರ್ವವಾಗಿ ಕೌರವ- ಪಾಂಡವರಿಂದ ವ್ಯೂಹ ರಚನೆ ಆಗ್ತದೆ ಆಗ.. ಸಂಜಯ ದೃತರಾಷ್ಟ್ರನಿಗೆ ಹೇಳ್ತಾನೆ.. ಮಹಾ ಯುದ್ಧಕ್ಕೆ ಮಹಾ ಸಿದ್ಧತೆಗಳಾದವು. ಎರಡೂ ಕಡೆಗಳಲ್ಲಿ ಸಾಗರದಂತೆ ಸೈನ್ಯ ಸೇರಿತ್ತು ಈಗ ಎರಡೂ ಕಡೆಯಲ್ಲಿನ ಪ್ರಮುಖರು ಒಂದು ಕಡೆಯಲ್ಲಿ ಸಮಾಲೋಚಿಸಿ ಯುದ್ಧ ನಿಬಂಧನೆಗಳನ್ನು ರೂಪಿಸಿದರು.. ಆಮೇಲೆ ಏನಾಯಿತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:20:38
S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?
9/5/2024
S1EP - 457: ಕಷ್ಟಗಳು ಯಾಕಾಗಿ ಬರುತ್ತವೆ ? | Why do difficulties arise?
ಒಂದು ದಿನ ಪ್ರಯಾಣಿಕನೊಬ್ಬ ಬಿರು ಬೇಸಿಗೆಗೆ ಬಳಲಿ ವಿಶ್ರಾಂತಿ ಬಯಸಿದ . ಆಗ ದೂರದಲ್ಲಿ ಒಂದು ಮರ ಕಾಣಿಸಿತು. ಅಲ್ಲಿಗೆ ಹೋಗಿ ನೋಡಿದಾಗ ಅಲ್ಲೊಬ್ಬ ಮಲಗಿದ್ದ. ಆದರೆ ಅವನ ಎದೆ ಮೇಲೆ ಏನೋ ಚಲಿಸುತ್ತಿತ್ತು. ಅದೇನದು? ಯಾರು ಈ ವ್ಯಕ್ತಿ ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:23
S3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palace
8/30/2024
S3 : EP - 70 : ಸಂಜಯನಿಗೆ ವ್ಯಾಸ ಮಹರ್ಷಿಗಳು ಅನುಗ್ರಹಿಸಿದ ದಿವ್ಯ ದೃಷ್ಟಿ | When Vedavyasa came to the palace
ಅತ್ತ ಕುರುಕ್ಷೇತ್ರದಲ್ಲಿ ಯುದ್ಧ ಸಿದ್ದತೆಗಳು ಆಗ್ತಾ ಇರುವಾಗ ಇತ್ತ ತನ್ನ ಮಕ್ಕಳು ಮಾಡಿದ, ಈವಾಗಲೂ ಮಾಡ್ತಾ ಇರುವ ಅನ್ಯಾಯ ಹಾಗು ಅದರ ಪರಿಣಾಮಗಳ ಬಗ್ಗೆ ದೃತರಾಷ್ಟ್ರ ಚಿಂತಿತನೂ ದುಃಖಿತನೂ ಆಗಿದ್ದ. ಆಗ ಕುರು ಕುಲ ಪಿತಾಮಹರಾದ ಭೂತ ಭವಿಷ್ಯಗಳನ್ನು ತಿಳಿದಿದ್ದ ಮಹರ್ಷಿ ವೇದವ್ಯಾಸರು ಅರಮನೆಗೆ ಬರ್ತಾರೆ.. ಆಗ ಏನಾಯಿತು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:17:18
S1EP - 456:ನಂಟಿನ ಗಂಟಿನ ಪರಮಾರ್ಥವೇನು?.Everything in this world is related to each other
8/29/2024
ಧರಣಿ ಕಿರಣದ ನಂಟು ಗಗನ ಸಲಿಲದ ನಂಟು, ಧರಣಿ ಚಲನೆಯ ನಂಟು,ಮರುತನೊಳ್ ನುಂಟು. ಪರಿಪರಿಯ ನಂಟುಗಳ್'ಇನ್ನೊಂದಕ್ಕ್ ಅಂಟಿ.. ವಿಶ್ವ. ಕಿರಿದು ಪಿರಿದೊಂದುಂಟು ಮಂಕುತಿಮ್ಮ.
ಈ ಜಗತ್ತಿನಲ್ಲಿ ಪ್ರತಿಯೊಂದಕ್ಕೂ ಒಂದಕ್ಕೊಂದು ಸಂಬಂಧ ಇದೆ... ಸೂರ್ಯನ ಬೆಳಕಿಗೂ ಈ ಭೂಮಿಗೂ ಎಲ್ಲದಕ್ಕೂ ಒಂದಕ್ಕೊಂದು ನಂಟಿದೆ. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:05:58
S1EP - 455: ಒಂದು ಸಣ್ಣ ಘಟನೆ ಬದುಕು ಬದಲಿಸಬಲ್ಲದೇ ? | Lesson for life
8/24/2024
ಸೂಕ್ಷ್ಮ ಸಂವೇದಿಯಾಗಿದ್ದರೆ, ಏನಾದರೂ ಸಾಧಿಸಬೇಕು ಎಂಬ ಛಲ ಇದ್ದರೆ, ಕಾಲ ಕೂಡಿ ಬಂದಿದ್ದೆ ಆದರೆ, ಕಡೆಯದಾಗಿ ದೈವಾನುಗ್ರಹ ಇದ್ದರೆ ಅಥವಾ ತನ್ನಲ್ಲಿ ತನಗೆ ನಂಬಿಕೆ ಇದ್ದರೆ ಹೌದು ಅಂತ ಉತ್ತರಿಸಬಹುದು. ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:07:05
S3 : EP - 69 : ಶಿಖಂಡಿಯ ಕಥೆ | The story of Shikhandi
8/23/2024
S3 : EP - 69 : ಶಿಖಂಡಿಯ ಕಥೆ | The story of Shikhandi
ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಈ ಕಥೆಯಲ್ಲಿ ಭೀಷ್ಮರು ಶಿಖಂಡಿಯ ಕಥೆ ಹೇಳುತ್ತಾರೆ.... ದುರ್ಯೋಧನ ಚಿಂತಿತನಾಗಿದ್ದ . ಭೀಷ್ಮರು ಯಾವುದೇ ಕಾರಣಕ್ಕೂ ಶಿಖಂಡಿ ಜೊತೆ ಯುದ್ಧ ಮಾಡುವುದಿಲ್ಲ ಎಂದರು. ಇದಕ್ಕೆ ಅವರು ಬಲವಾದ ಕಾರಣವನ್ನೂ ನೀಡುತ್ತಾರೆ . ಹಾಗಾದ್ರೆ ಆ ಕಾರಣ ಏನು ಎಂಬುವ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:16:10
S1EP - 454: ಇದ್ದದ್ದೆಲ್ಲವ ಕಳೆದುಕೊಂಡವನ ಕಥೆ | The story of a man who lost everything
8/17/2024
ಶ್ರೀಮಂತನೊಬ್ಬ ಷೇರು ಮಾರುಕಟ್ಟೆಯಲ್ಲಿ ತನ್ನ ಸಂಪತ್ತೆಲ್ಲವನ್ನು ಕಳೆದುಕೊಂಡ, ಭಯ ದುಃಖಗಳಿಂದ ಮತಿಹೀನನಂತಾದ ಇನ್ನು ಬದುಕಿ ಪ್ರಯೋಜನವೇ ಇಲ್ಲ ಸಾಯುವುದೇ ಸರಿ ಎಂದು ನಿರ್ಧರಿಸಿದವನನ್ನು ಹಿತೈಷಿಗಳು ಒಬ್ಬ ಸಂತನ ಹತ್ತಿರ ಕರ್ಕೊಂಡು ಬಂದ್ರು. ಆಗ..ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:05:49
S3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's message
8/16/2024
S3 : EP - 68 : ಕೌರವರ ಸಂದೇಶಕ್ಕೆ ಪಾಂಡವರ ಉತ್ತರ | Pandava's reply to Kaurava's message
ಆತ್ಮೀಯ ಓದುಗರೇ ..
ಇದು ಮನೋಹರ ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕೌರವರು ಕಳುಹಿಸಿದ ಸಂದೇಶವನ್ನು ಉಲೂಕ ಪಾಂಡವರಿಗೆ ತಿಳಿಸಿದ ನಂತರ ಏನಾಯಿತು, ಪಾಂಡವರ ಉತ್ತರ ಏನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:14:57
S1EP - 453: ಚಂಚಲ ಚಿತ್ತ | Restless mind
8/10/2024
ಸ್ಥಿರವಾದ ಮನಸ್ಸಿಲ್ಲದ ವ್ಯಕ್ತಿ ತನ್ನ ಹೆಂಡತಿಯಿಂದ ಸಾಕಷ್ಟು ಹಣ ಪಡೆದು ಹಸುವನ್ನು ಕೊಂಡುಕೊಳ್ಳಲು ಸಂತೆಗೆ ಹೋದ. ದುಡ್ಡಿನ ಚೀಲ ಹೊಂದಿದ ಈತನನ್ನ ವ್ಯಾಪರಿಯೊಬ್ಬ ಮತನಾಡಿಸಿದ....ಪೂರ್ತಿ ಕೇಳಿ..ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:16
S3 : EP - 67 : ದುರ್ಯೋಧನನ ಸಂದೇಶ | Message of Duryodhana
8/9/2024
S3 : EP - 67 : ದುರ್ಯೋಧನನ ಸಂದೇಶ | Message of Duryodhana
ಇದು ಮನೋಹರ ಮಹಾಭಾರತ ಕಥಾ ಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಮಹಾಭಾರತ ಯುದ್ಧಕ್ಕೆ ತಯಾರಾಗಿದ್ದ ದುರ್ಯೋಧನ, ತನ್ನ ದೂತನನ್ನು ಕರೆದು ಪಾಂಡವರಿಗೆ ಒಂದು ಸಂದೇಶ ಕಳುಹಿಸಿದ. ಈ ಸಂದೇಶ ಮುಂದೆ ಯುದ್ಧದಲ್ಲಿ ದುರ್ಯೋಧನನ ಅಂತ್ಯಕ್ಕೆ ನಾಂದಿ ಹಾಡಿದಂತಿತ್ತು . ಅದೇನದು ಸಂದೇಶ ಎಂಬ
Duration:00:15:33
S1EP - 452: ಜಪಾನಿನ ಪುರಾಣ ಕಥೆ | Story of Japan Family
8/8/2024
ಇಝನಾಕಿ ಹಾಗು ಇಝನಾನಿ ಎಂಬ ದಂಪತಿಗಳ ಕಥೆ ಬರ್ತದೆ, ಜಪಾನ್ ದೇಶ ಒಂದು ದ್ವೀಪ ಸಮೂಹ, ಸಣ್ಣ ಸಣ್ಣ ದ್ವೀಪಗಳು ಸೇರಿ ದೇಶ ಆದದ್ದು. ಹಿಂದೆ ಇವೆಲ್ಲಾ ಸಮುದ್ರದಲ್ಲಿ ಮುಳುಗಿತ್ತಂತೆ ಇಝನಾಕಿ ಮತ್ತು ಇಝನಾನಿ ಎಂಬ ದೈವಾಂಶ ಸಂಭೂತ ದಂಪತಿಗಳು ಸಾಗರದಾಳದಿಂದ ಈ ದ್ವೀಪಗಳನ್ನು ಮೇಲೆತ್ತಿ ತಂದರಂತೆ.. ಆವಾಗ ಈ ದಂಪತಿಗಳಿಗೆ ನೂರಾರು ಮಕ್ಕಳಾದ್ರು ಆಗ.ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:07:43
S1EP - 451: ಭಕ್ತಿಯ ಪರಿಭಾಷೆ ಏನು ?| Shree Krishna and Sudhama
8/3/2024
ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:24
S3 : EP - 66 : ಭೀಷ್ಮರ ಆಶೀರ್ವಾದ | Bhishma's blessings
8/2/2024
ದುರ್ಯೋಧನ ತನ್ನ ಹನ್ನೊಂದು ಅಕ್ಷೋಹಿಣಿ ಸೈನ್ಯದ ಒಂದೊಂದು ತುಕಡಿಗೆ ಒಬ್ಬೊಬ್ಬ ಸೇನಾ ನಾಯಕನನ್ನು ಆರಿಸಿ ಪಟ್ಟಕಟ್ಟಿದ. ನಂತರ .. ಅವರೆಲ್ಲರನ್ನು ಹಿಂದಿಟ್ಟುಕೊಂಡು ಭೀಷ್ಮರ ಬಳಿ ಹೋಗಿ ಎರಡೂ ಕೈಗಳನ್ನು ಜೋಡಿಸಿ ನಮಸ್ಕಾರ ಮಾಡ್ತಾ.. ಪಿತಾಮಹ, ಸೈನ್ಯ ಎಷ್ಟೇ ದೊಡ್ಡದಾಗಿರಲಿ ಸಮರ್ಥವಾಗಿರಲಿ ಅದಕ್ಕೆ ಯೋಗ್ಯನಾದ ನಾಯಕ ಇಲ್ಲದೆ ಹೋದರೆ ಅದರ ಸಾಮರ್ಥ್ಯ ವ್ಯರ್ಥವಾಗುತ್ತದೆ! ನೀವು ನೀತಿಯಲ್ಲಿ ಶುಕ್ರಾಚಾರ್ಯರಿಗೆ ಸಮ, ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ, ತೇಜಸ್ಸಿನಲ್ಲಿ ಸೂರ್ಯ ಸಮಾನ ಧರ್ಮದಲ್ಲಿ ಪ್ರತಿಷ್ಠಿತನಾಗಿರುವೆ.. ನೀವು ನಮ್ಮ ಸೇನಾ ನಾಯಕನಾಗಿ ನಮ್ಮನ್ನ ಸಂರಕ್ಷಿಸಬೇಕು ಅಂದಾಗ.. ಮುಂದೇನಾಯಿತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:15:35
S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharata
7/26/2024
S3 : EP - 65 : ಮಹಾಭಾರತದ ಮಹಾಯುದ್ಧ ನಿಶ್ಚಯ | The Great War of Mahabharata
ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಇದೀಗ ಮಹಾಭಾರತದ ಮಹಾ ಯುದ್ಧ ನಿಶ್ಚಯವಾಗಿದೆ. ಕೌರವರ ಬಳಿ ಸಂಧಾನಕ್ಕಾಗಿ ಬಂದ ಕೃಷ್ಣನ ಸಂಧಾನ ವಿಫಲವಾಯಿತು. ಬಳಿಕ ವಿಷಯ ತಿಳಿಸಲು ಪಾಂಡವರ ಬಳಿ ಬಂದ. ಆಗ ಪಾಂಡವರು ಏನೆಂದರು. ಯುದ್ದಕ್ಕೆ ಪಾಂಡವರ ತಯಾರಿ ಹೇಗಿತ್ತು ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:13:46
S1EP - 450: ಯುದ್ಧದ ಭೀತಿ| Fear of war
7/25/2024
ಒಂದು ರಾಜ್ಯದ ಮೇಲೆ ಯುದ್ಧದ ಕಾರ್ಮೋಡ ಕವಿದಿತ್ತು, ಸೈನಿಕರ ಮನಸ್ಸು ಭಯದಿಂದ ಕೂಡಿತ್ತು, ಶತ್ರು ಬಲಾಢ್ಯನಾಗಿದ್ದ, ಸಾವಿರ ಸಾವಿರ ಸೈನ್ಯದ ಬಲ ಹೊಂದಿದ್ದ. ಎದುರು ಬಂದವರ ಸೋಲಿಸುವ ಶಕ್ತಿ ಅವನಿಗಿತ್ತು. ಅಷ್ಟೇ ಅಲ್ಲದೆ ಅವನು ತನ್ನೆದುರು ಸೋತವರ ರಾಜ್ಯದ ಜನರನ್ನ ಅವರ ಕುಟುಂಬವನ್ನ ಕ್ರೂರ ರೀತಿಯಲ್ಲಿ ನಡೆಸಿಕೊಂಡ ಇತಿಹಾಸವಿತ್ತು. ಆಗ.. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:47
S1EP - 449: ಸಾತ್ವಿಕ ಹಾಗು ದೈವಭಕ್ತ ಬರ್ಬರಿ | Story from Mahabharata
7/20/2024
ಅರ್ಜುನನ ಮೊಮ್ಮಗ, ಅಂದ್ರೆ .. ಅರ್ಜುನನ ಮಗ ಘಟೋದ್ಗಜನ ಮಗ 'ಬರ್ಬರಿ' ಮಹಾನ್ ಸಾತ್ವಿಕ ಹಾಗು ದೈವ ಭಕ್ತ.. ಅವನ ಬದುಕಿನ ಘಟನೆ ಇದು. ಒಂದು ಬಾರಿ ಋಷಿ ಮುನಿಗಳು ಅಪೂರ್ವವಾದ ಯಾಗದ ಸಂಕಲ್ಪವೊಂದನ್ನು ಮಾಡಿದರು. ಲೋಕಹಿತಕ್ಕಾಗಿ ಮಾಡುವ ಈ ಯಜ್ಞಕ್ಕೆ ಯಾವುದೇ ವಿಗ್ನವಾಗದಂತೆ ಕಾಯುವ ವೀರ ಧೀರನ ಅಗತ್ಯ ಇತ್ತು. ಬರ್ಬರಿಯೇ ಈ ಕೆಲಸಕ್ಕೆ ಯೋಗ್ಯ ಎಂದು ಅವನಲ್ಲಿ ವಿನಂತಿ ಮಾಡಿದರು.. ಆಗ ..
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:05
S3 : EP - 64 : ಕರ್ಣನ ನೆನೆದ ಕುಂತಿ | Story of Karna
7/19/2024
S3 : EP - 64 : ಕರ್ಣನ ನೆನೆದ ಕುಂತಿ Story of Karna
ಯುದ್ಧದ ತಯಾರಿ ಆಗ್ತಾ ಇದೆ ಎಲ್ಲರೂ ಯುದ್ಧದ ಕುರಿತೇ ಮಾತಾಡ್ತಾರೆ, ಮುಂದೆ .. ಶ್ರೀ ಕೃಷ್ಣ ವಾಸುದೇವ ಉಪಪ್ಲಾವ್ಯಕ್ಕೆ ಹೊರಟು ಹೋದ ನಂತರ ಕುಂತಿ, ಮುಂದೆ ಬರುವಂತಹಾ ಘೋರ ವಿನಾಶವನ್ನು ನೆನೆದು ಬೇಸರಗೊಂಡಳು.. ಅವಳಿಗೆ ಭಯವಿತ್ತು.. ತನ್ನ ಮಕ್ಕಳು ಐದು ಮಂದಿ ಅವರು ನೂರು ಮಂದಿ ! ಮುಂದೇನಾಗ್ತದೋ ಎಂದು ಯೋಚಿಸಿ ಭಯಭೀತಳಾಗಿದ್ದಾಗ.. ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:12:41
S1EP - 448: ವೇದಗಳನ್ನು ಲೂಟ ಹೊರಟ ಅಲೆಕ್ಸಾಂಡರ್| Alexander the Great
7/18/2024
ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬಂದ ವಿಷಯವನ್ನ ನಾವೆಲ್ಲ ಚರಿತ್ರೆಗಳಲ್ಲಿ ಓದಿದ್ದೇವೆ. ದೇಶದ ಗಡಿ ದಾಟಿ ಹೊರಗೂ ಇದರ ಕೀರ್ತಿ ವ್ಯಾಪಿಸಿತ್ತು. ಧರ್ಮ ಲುಪ್ತವಾಗದಂತೆ, ಅಯೋಗ್ಯರ ಕೈಗೆ ಸಿಗದಂತೆ ಕಾಯುವವರಿದ್ದರು. ಅದರ ಹಿಂದಿನ ಮನೋಜ್ಞ ಕತೆ ಇಂದಿನ ಸಂಚಿಕೆಯಲ್ಲಿ.
ಅಲೆಕ್ಸಾಂಡರ್ ನ ಗುರು ಅರಿಸ್ಟಾಟಲ್ ಅವರು ಪ್ಲಾಟೊರ ಶಿಷ್ಯರು, ಅವರ ಪರಮ ಗುರು ಸಾಕ್ರೆಟೀಸ್. ಅಲೆಕ್ಸಾಂಡರ್ ಭಾರತದ ಮೇಲೆ ದಂಡೆತ್ತಿ ಬರುವಾಗ ಗುರುವಿನ ಬಳಿ ಭಾರತದಿಂದ ಬರುವಾಗ ತಮಗಾಗಿ ಏನು ತರಲಿ ಎಂದು ಕೇಳಿದ. ಆಗ...
ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:05:47
S1EP - 447: ಪ್ರಾಮಾಣಿಕ ಮಾಣಿಯ ಕಥೆ | Story of a boy
7/13/2024
ಸುಮಾರು ಎಂಬತ್ತು ವರ್ಷಗಳ ಹಿಂದಿನ ಸತ್ಯ ಕಥೆ ಇದು. ಆಗ ದಕ್ಷಿಣಕನ್ನಡದವರು ಮುಂಬೈಗೆ ಹೋಗಿ ಉಡುಪಿ ಅಡುಗೆಯ ರುಚಿಯನ್ನು ಮಹಾರಾಷ್ಟದವರೆಗೆ ಪರಿಚಯಿಸಿದ್ರು. ಮುಂಬೈ ಶಹರದಲ್ಲಿ ಉಡುಪಿಯ ಇಡ್ಲಿ, ದೋಸೆಗಳು ಜನಪ್ರಿಯವಾಗಿದ್ದ ಕಾಲ.. ಮುಂದೆ.... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ.
ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:06:56
S3 : EP - 63 : ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birth
7/12/2024
S3 : EP - 63 :ಕರ್ಣನಿಗೆ ತನ್ನ ಜನ್ಮ ರಹಸ್ಯ ತಿಳಿದಾಗ.. | The secret of Karna's birth
ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು. ಕರ್ಣನಿಗೆ ಕೃಷ್ಣ ಜನ್ಮ ರಹಸ್ಯವನ್ನು ತಿಳಿಸಿದ ಕಥೆ ಇದು. ಪಾಂಡವರ ಪರವಾಗಿ ಕೌರವರ ಜೊತೆ ಸಂಧಾನಕ್ಕೆ ಬಂದಿದ್ದ ಕೃಷ್ಣ ಕರ್ಣನನ್ನು ಭೇಟಿ ಮಾಡಿ ಕರ್ಣನ ಹುಟ್ಟಿನ ರಹಸ್ಯವನ್ನು ತಿಳಿಸುತ್ತಾನೆ. ಆಗ ಕರ್ಣನ ಪ್ರತಿಕ್ರಿಯೆ ಎಂಥವರಲ್ಲೂ ಆಶ್ಚರ್ಯ ಹುಟ್ಟಿಸುತ್ತದೆ ಹಾಗಾದ್ರೆ ಅಲ್ಲಿ ನಡೆದಿದ್ದೇನು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com
Duration:00:13:02