Sandhyavani-logo

Sandhyavani

Kids & Family Podcasts

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Location:

India

Description:

A very unique podcast series comprising children stories, moral stories, lifestyle, human interest, health, wellbeing, excerpts & stories from the famous Ramayana by Dr. Sandhya S. Pai, Managing Editor of Taranga - Karnataka's favorite Kannada weekly lifestyle magazine.

Language:

Kannada

Contact:

6364593790


Episodes
Ask host to enable sharing for playback control

S1EP - 432 :ಕಾಡಿನಲ್ಲಿ ನೀರು ಹುಡುಕ ಹೊರಟ ಕವಿರತ್ನ ಕಾಳಿದಾಸ | Story of Kalidasa

5/11/2024
ಕವಿರತ್ನ ಕಾಳಿದಾಸ ಒಂದು ಕಾಡಿನ ಮೂಲಕ ಪ್ರಯಾಣ ಮಾಡ್ತಾ ಇದ್ದ, ಬಹಳಾ ದೂರ ಕ್ರಮಿಸಿದ ನಂತರ ಅವನಿಗೆ ಬಾಯಾರಿಕೆ ಆಯ್ತು.. ಅತ್ತತ್ತ ಹುಡುಕಾಡಿದ ನೀರು ಕಾಣಲಿಲ್ಲ .. ಬಾವಿ, ಕೊಳ, ತೊರೆ ಏನೂ ಕಾಣಲಿಲ್ಲ ಆಗ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:05:54

Ask host to enable sharing for playback control

S3 : EP - 55 : ಪಾಂಡವರ ಅಜ್ಞಾತವಾಸದ ಕೊನೆಯ ಹಂತ | Agnathavasam of Pandavas

5/10/2024
ಇದು ಮಹಾಭಾರತದ ಸುಂದರ ಕಥೆಗಳಲ್ಲಿ ಒಂದು . ಪಾಂಡವರ ಅಜ್ಞಾತ ವಾಸ ಮುಗಿಯುವ ಹಂತದಲ್ಲಿತ್ತು. ಇತ್ತ ಕೌರವರು ಪಾಂಡವರನ್ನು ಹುಡುಕಲು ಯತ್ನಿಸುತ್ತಿದ್ದರು. ಹೀಗಿರುವಾಗ ವಿರಾಟ ರಾಜನ ವಿರುದ್ದ ಕೌರವರು ಯುದ್ಧ ಸಾರಿದರು. ಆಗ ಪಾಂಡವರು ಈ ಯುದ್ಧದಲ್ಲಿ ಪಾಲ್ಗೊಂಡರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:15:19

Ask host to enable sharing for playback control

S1EP - 431 : ಜೀವನ ಪ್ರೀತಿ ಎಂದರೇನು ? How to lead happy life

5/9/2024
ನೌಟಂಕಿಯಿಂದ ಜೀವನ ನಡೆಸ್ತಾ ಇದ್ದ ಒಂದು ಕುಟುಂಬ ಇತ್ತು, ನೌಟಂಕಿ ಅಂದ್ರೆ ಗಾನ , ನರ್ತನ, ಸಮೃದ್ಧವಾದ .. ಹೆಚ್ಚಾಗಿ ನಾಲ್ಕು ರಸ್ತೆ ಕೂಡುವ ಕಡೆ, ಹಾಗು ಕೆಲವೊಮ್ಮೆ ರಂಗ ಮಂದಿರದಲ್ಲಿ ನಡೆಯುವ ನಾಟಕಗಳು. ರೇಡಿಯೋ ಟೀವಿಗಳು ಇಲ್ಲದ ಕಾಲದಲ್ಲಿ .. ಇದೊಂದು ಜನಸಾಮಾನ್ಯರ ಮನೋರಂಜನೆಯ ಪರಿಯಾಗಿತ್ತು .. ಕೆಲವು ಕುಟುಂಬಗಳು ಇದನ್ನ ಕುಲ ಕಸಬನ್ನಾಗಿ ಮಾಡಿಕೊಂಡಿದ್ದವು.. ಅಂತಾ ಒಂದು ಕುಟುಂಬದ ಕಥೆ ಇದು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:56

Ask host to enable sharing for playback control

S1EP - 430 : ತಿಮ್ಮ ಗುರುವಿನ ಪಾಠ | Lesson's from Timmaguru

5/4/2024
ಸತ್ಸಂಗ ನಡೆಯುತ್ತಿತ್ತು ಸಂತರೊಬ್ಬರು ಬದುಕು ಹೇಗಿರಬೇಕು ಎನ್ನುವ ವಿಷಯದ ಕುರಿತು ಪ್ರವಚನ ನೀಡುತ್ತಿದ್ದರು. ಒಮ್ಮೆಲೆ ಮಕ್ಕಳ ಮಾತಿನ ಕಲರವ ಕೇಳಿಸಿತು. ಒಂದಷ್ಟು ಮಂದಿ ಮಕ್ಕಳು ನಗುತ್ತ, ಕುಣಿಯುತ್ತಾ, ಕಿರುಚಾಡುತ್ತಾ ಬಂದರು. ಎಲ್ಲರ ದೃಷ್ಟಿ ಮಕ್ಕಳತ್ತ ತಿರುಗಿತು. ಸಂತರು ಮಾತು ನಿಲ್ಲಿಸಿದ್ರು... ಆಮೇಲೆನಾಯ್ತು? ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:56

Ask host to enable sharing for playback control

S3 : EP - 54 : ಕೀಚಕ ವಧೆ | Story of Kichaka

5/3/2024
ಇದು ಮನೋಹರ ಮಹಾಭಾರತ ಕಥಾಮಾಲಿಕೆಯ ಸುಂದರ ಕಥೆಗಳಲ್ಲಿ ಒಂದು. ಕೀಚಕ ದ್ರೌಪದಿಯನ್ನು ತನ್ನವಳನ್ನಾಗಿಸಿಕೊಳ್ಳಬೇಕೆಂದು ತನ್ನ ಅಕ್ಕನಲ್ಲಿ ದ್ರೌಪದಿಯನ್ನು ಹೇಗಾದರೂ ಮಾಡಿ ತಾನು ಇದ್ದಲ್ಲಿಗೆ ಕಳಿಸಲು ಕೇಳಿಕೊಂಡ . ತಮ್ಮನ ಮೇಲಿನ ಪ್ರೀತಿಯಿಂದ ಕೀಚಕನ ಅಕ್ಕ ದ್ರೌಪದಿಯನ್ನು ಒತ್ತಾಯವಾಗಿ ಕೀಚಕನಿದ್ದಲ್ಲಿಗೆ ಕಳುಹಿಸಿದಳು. ಮುಂದೆನಾಯ್ತು , ದ್ರೌಪದಿಗೆ ಅಲ್ಲಾದ ಅವಮಾನವೇನು, ಕೀಚಕನ ವಧೆ ಹೇಗಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:15:07

Ask host to enable sharing for playback control

S1EP - 429 :ಭಾರದ್ವಾಜ ಋಷಿಯ ಕತೆ. Story of Bharadhvaja Muni

4/27/2024
ವೇದಕಾಲದಲ್ಲಿ ಭಾರದ್ವಾಜ ಎಂಬ ಋಷಿ ಇದ್ರು, ಇವರು ಬ್ರಹಸ್ಪತಿಗೆ ತಾರೆಯಲ್ಲಿ ಜನಿಸಿದ ಶಂಯು ಎನ್ನುವ ಅಗ್ನಿಯ ಮಗ.. ಅಂದಿನ ಪದ್ದತಿಯಂತೆ ಉಪನಯನಾದಿ ಕರ್ಮಗಳ ನಂತರ ವಿದ್ಯಾಭ್ಯಾಸಕ್ಕಾಗಿ ಗುರುಕುಲಕ್ಕೆ ಕಳಿಸಿದರು.. ಸಾಮಾನ್ಯವಾಗಿ ಮೊದಲ ಹಂತದ ಶಿಕ್ಷಣ ಹದಿಮೂರು ವರ್ಷಗಳ ತನಕ ನಡೆದು ವಿದ್ಯಾರ್ಥಿ ಮನೆಗೆ ವಾಪಾಸ್ ಹೋಗ್ಬೇಕು ಇದು ಸಾಮಾನ್ಯ ಕ್ರಮ.. ಆದ್ರೆ ಭಾರಧ್ವಾಜರ ಮಟ್ಟಿಗೆ ಅದು ಹೀಗೆ ನಡೀಲಿಲ್ಲ, ಆಮೇಲೇನಾಯ್ತು ಕೇಳಿ .. ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:04:51

Ask host to enable sharing for playback control

S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa

4/26/2024
S3 : EP - 53 : ಅಜ್ಞಾತವಾಸದ ತಯಾರಿ | Preparation for Ajnathavasa ಪಾಂಡವರ ಹನ್ನೆರಡು ವರ್ಷಗಳ ವನವಾಸ ಮುಗೀತಾ ಬರ್ತಿತ್ತು, ಅವರಿನ್ನು ಒಂದು ವರ್ಷ ಅಜ್ಞಾತ ವಾಸಕ್ಕೆ ಸಜ್ಜಾಗಬೇಕಿತ್ತು, ಹನ್ನೆರಡು ವರ್ಷಗಳಷ್ಟು ದೀರ್ಘವಾದ ಕಾಲ ತಮ್ಮೊಂದಿಗೆ ಬಾಂಧವರಂತಿದ್ದ ವಿದ್ವಾಂಸರಾದ ಬ್ರಾಹ್ಮಣರನ್ನೂ, ತಪಸ್ವಿಗಳನ್ನೂ ಋಷಿ ಮುನಿಗಳನ್ನೂ ಬೀಳ್ಕೊಡಬೇಕಾಗಿ ಬಂದಾಗ.. ಪಾಂಡವರು ದುಃಖದಿಂದ ಅವರಿಗೆ ನಮಿಸಿ ಆಶೀರ್ವಾದ ಪಡೆದು ಹೊರಟಾಗ.. ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:13:42

Ask host to enable sharing for playback control

S1EP - 428 :ಪೆಟ್ಟುತಿಂದ ಮಕ್ಕಳು| Story of a family

4/25/2024
ತಂದೆಯೊಬ್ಬ ತನ್ನ ಇಬ್ಬರು ಮಕ್ಕಳೊಂದಿಗೆ ಪ್ರಾಯಾಣ ಮಾಡ್ತಾ ಇದ್ದ, ಪ್ರಯಾಣದ ಮದ್ಯದಲ್ಲಿ ಅವನಿಗೆ ಯಾಕೋ ಏನೋ ಭಯಂಕರ ಸಿಟ್ಟು ಬಂತು.. ಗಟ್ಟಿಗಟ್ಟಿಯಾಗಿ ಬೈದು ಮಕ್ಕಳಿಗೆ ಹೊಡಿಯೋಕೆ ಶುರು ಮಾಡಿದ.. ಬಹಳಾ ಹೊತ್ತು ಹೀಗೆ ಹೊಡೆತ ಬೈಗಳು ಆಯ್ತು.. ಮಕ್ಕಳು ಮುಸು ಮುಸು ಅಳ್ತಾ ಇದ್ದ್ರು ಪಕ್ಕದಲ್ಲಿ ಪ್ರಯಾಣಿಸುತ್ತಾ ಇದ್ದ ಒಬ್ಬ ಇದನ್ನು ಗಮನಿಸ್ತಾ ಇದ್ದ.. ಆಮೇಲೇನಾಯ್ತು... ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:48

Ask host to enable sharing for playback control

S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ|Surya Mandal

4/20/2024
S1EP - 427 : ಸೂರ್ಯ ಮಂಡಲ, ನೀಹಾರಿಕೆ ಹಾಗು ಬೆಳಕಿನ ವೇಗ.. ಬೆಳಕು ಒಂದು ಸೆಕೆಂಡಿಗೆ ಒಂದು ಲಕ್ಷದ ಎಂಭತ್ತಾರು ಸಾವಿರ ಮೈಲಿಗಳಷ್ಟು ವೇಗದಲ್ಲಿ ಪಯಣಿಸುತ್ತದೆ. ಒಂದು ಸೆಕೆಂಡಿಗೆ ಈ ವೇಗದಲ್ಲಿ ಏಳುವರೆ ಬಾರಿ ಭೂಮಿಗೆ ಸುತ್ತು ಬರಬಹುದು ಇದೇ ವೇಗದಲ್ಲಿ ಬೆಳಕಿನ ಪಯಣ ಒಂದು ವರ್ಷ ಸಾಗುವುದನ್ನ ಒಂದು ಬೆಳಕಿನ ವರ್ಷ ಎಂದು ಪರಿಗಣಿಸಿ ಅಂತರ್ನಿಹಾರಿಕೆಗಳ ದೂರವನ್ನ ಅಳೆಯಲಾಗುತ್ತದೆ. ಆಮೇಲೆ ..ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:07:25

Ask host to enable sharing for playback control

S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers

4/19/2024
S3 : EP - 52 : ಸಹೋದರರಿಗೆ ಮರುಜೀವ ನೀಡಿದ ಯುಧಿಷ್ಠಿರ | Yudhishthira revived his brothers ಪಾಂಡವರು ಕಾಮ್ಯಕ ವನದಿಂದ ದ್ವೈತ ವನಕ್ಕೆ ಮರಳಿ ಹೋದರು.. ಅಲ್ಲಿ ಮಿತಾಹಾರಿಗಳಾಗಿ ವೃತನಿಷ್ಠರಾಗಿ ಇರ್ತಾ ಇದ್ರು. ಹೀಗಿರುವಾಗ ಒಂದು ದಿನ ಒಬ್ಬ ಬ್ರಾಹ್ಮಣ ಅವರು ಇದ್ದಲ್ಲಿಗೆ ಬಂದ, ಮತ್ತೆ ಹೇಳಿದ .. ಅಯ್ಯಾ ಜಿಂಕೆಯೊಂದು ನನ್ನ ಆಶ್ರಮಕ್ಕೆ ಬಂತು ನಾನು ಅಗ್ನಿ ಮತಿಸುವ ದಂಡ ಮತ್ತು ಅರಣೆಯನ್ನು ತೂಗುಹಾಕಿದ ಮರದ ಕಾಂಡಕ್ಕೆ ಮೈ ಉಜ್ಜುತ್ತಾ ಇತ್ತು ಆವಾಗ ಅದರ ಕೊಂಬಿಗೆ ಅರಣೆ ದಂಡಗಳು ಸಿಲುಕಿಕೊಂಡವು ಆಮೇಲೆ ಏನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:18:32

Ask host to enable sharing for playback control

S1EP - 426 : ಎಲ್ಲವೂ ದೇವರ ಇಚ್ಛೆ? | Is everything God's will?

4/18/2024
S1EP - 426 :ಎಲ್ಲವೂ ದೇವರ ಇಚ್ಛೆ? | Is everything God's will? ಆಳ ಸಮುದ್ರದ ನಡುವೆ ಹಡಗೊಂಡು ಬಿರುಗಾಳಿಗೆ ಸಿಲುಕಿತು. ಆ ಹಡಗಿನಲ್ಲಿ ಇದ್ದವರೆಲ್ಲಾ ದೊಡ್ಡ ದೊಡ್ಡ ವ್ಯಕ್ತಿಗಳಾಗಿದ್ದರು. ಹೀಗಿರುವಾಗ ಅಲ್ಲಿದ್ದ ಜನರು ರಕ್ಷಣೆಗಾಗಿ ದೇವರ ಮೊರೆ ಹೋದರು. ಮುಂದೇನಾಯ್ತು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:00

Ask host to enable sharing for playback control

S1EP - 425 : ಸಾಮ್ರಾಟ್ ಮಿಲಿಂದನ ಕಥೆ |Story of Samrat Milind

4/13/2024
ಸಾಮ್ರಾಟ್ ಮಿಲಿಂದ ಸಾಧು ನಾಗಾರ್ಜುನರನ್ನ ಆಹ್ವಾನಿಸಬೇಕು ಅಂದುಕೊಂಡ ಹಾಗೆ ಒಬ್ಬ ಧೂತನನ್ನ ಆಹ್ವಾನದೊಂದಿಗೆ ಆಶ್ರಮಕ್ಕೆ ಕಳಿಸಿದ, ನಾಗಾರ್ಜುನ ಗಹಗಹಿಸಿ ನಗ್ತಾ.. ಹೌದೇನು ಆದ್ರೆ ನಾಗರ್ಜುನ ಎಂಬುದೊಂದು ವ್ಯವಹಾರಕ್ಕಾಗಿ ಯಾರೋ ಕೊಟ್ಟ ಹೆಸರು ಮಾತ್ರ.. ಅಂತದ್ದೊಂದು ಇಲ್ವೆ ಇಲ್ವಲ್ಲ ಅಂದ ಧೂತನಿಗೆ ಕಕ್ಕಾಬಿಕ್ಕಿ ಆಯ್ತು.. ಹುಚ್ಚನಂತೆ ಕಾಣುತ್ತಾನೆ ಅರಮನೆಗೆ ಕರ್ಕೊಂಡು ಹೋದ್ರೆ ಹೇಗೂ ಎಂದು ವಾಪಸ್ ಬಂದ.. ಆಮೇಲೆ ..... ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:07:31

Ask host to enable sharing for playback control

S1EP - 424 : ರಾಮಾಯಣದ ಕಥೆ | Story of Ramayana

4/11/2024
ರಾಮಾಯಣದ ಯುದ್ಧಖಾಂಡದಲ್ಲಿ ಬರುವ ಕಥೆ ಇದು. ಇಂದ್ರಜಿತುವಿನ ಭೀಕರ ಪ್ರಹಾರಗಳಿಂದ ಲಕ್ಷ್ಮಣ ಮೂರ್ಛೆ ಹೋಗಿದ್ದಾನೆ ಅವನ ಮೇಲೆ ಪ್ರಯೋಗಿಸಲಾದ ಆಯುಧಗಳ ಪರಿಣಾಮ ಅವನ ದೇಹ ಶಿಥಿಲವಾಗತೊಡಗಿತು....ಮುಂದೇನಾಯ್ತು ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:09:04

Ask host to enable sharing for playback control

S1EP - 423 : ಭಕ್ತಿಯ ಪರಿಭಾಷೆ ಏನು ? | What is the definition of devotion?

4/6/2024
ಕೃಷ್ಣ ಮತ್ತು ಸುಧಾಮರು ಬಾಲ್ಯದ ಗೆಳೆಯರು, ಸಾಂದೀಪನಿ ಮುನಿ ಆಶ್ರಮದಲ್ಲಿ ಒಟ್ಟಿಗೆ ಬೆಳೆದವರು ಒಂದು ದಿನ ಸಮಿತ್ತು ತರಲು ಹೋದವರಿಗೆ ಒಂದು ಮಾವಿನ ಮರ ಕಣ್ಣಿಗೆ ಬಿತ್ತಂತೆ.. ಮಾಗಿದ ಹಣ್ಣುಗಳಿಂದ ತುಂಬಿ ತೊನೆತಾ ಇದ್ದ ಆ ಮರ, ಹಣ್ಣುಗಳನ್ನ ನೋಡಿ ಇಬ್ರ ಬಾಯಲ್ಲೂ ನೀರು ಸುರಿಯಿತು.. ಆಮೇಲೇನಾಯ್ತು ? ಕೇಳಿ .ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:24

Ask host to enable sharing for playback control

S3 : EP - 51 :ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara

4/5/2024
In this episode, Dr. Sandhya S. Pai narrates very famous Mahabharata S3 : EP - 51 : ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ | Story of Uttara Kumara ಮನೋಹರ ಮಹಾಭಾರತದ ಅತ್ಯಂತ ಸುಂದರ ಕಥೆಗಳಲ್ಲಿ ಇದೂ ಒಂದು ಉತ್ತರ ಕುಮಾರ ಮತ್ತು ಬೃಹನ್ನಳೆಯ ಪ್ರಸಂಗ ಪಾಂಡವರು ವನವಾಸವನ್ನು ಮುಗಿಸಿ ಅಜ್ಞಾತವಾಸಕ್ಕಾಗಿ ವಿರಾಟನ ಆಸ್ಥಾನ ದಲ್ಲಿದ್ದರು. ಈ ಸಮಯದಲ್ಲಿಯೇ ದುರ್ಯೋಧನ ಪಾಂಡವರನ್ನು ಹುಡುಕಲು ಪ್ರಯತ್ನಿಸುತ್ತಿದ್ದ. ಈ ನಡುವೆ ಅತ್ತ ಕೌರವರು ಹಾಗೂ ಸುಶರ್ಮ ಸೇರಿ ವಿರಾಟ ರಾಜನ ವಿರುದ್ಧ ಯುದ್ಧಕ್ಕೆ ಹೋದರು. ಆ ಸಮಯದಲ್ಲಿ ಏನಾಯ್ತು ಉತ್ತರಕುಮಾರ ಮತ್ತು ಬೃಹನ್ನಳೆ ಹೇಗೆ ಯುದ್ಧ ದಲ್ಲಿ ಪಾಲ್ಗೊಂಡರು ಎಂಬ ಸುಂದರ ಕಥೆ ಕೇಳಿ ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:18:54

Ask host to enable sharing for playback control

S1EP - 422 : ಸಣ್ಣ ವಯಸ್ಸಲ್ಲೇ ಬಿಕ್ಷುವಾದ ಆಜಾನ್ ಬ್ರಹ್ಮ| Story of a monk

4/4/2024
ಆಜಾನ್ ಬ್ರಹ್ಮ ಲಂಡನ್ 'ನಲ್ಲಿ ಹುಟ್ಟಿ ಬೆಳೆದವರು ತಮ್ಮ ಹದಿನಾರನೇ ವರ್ಷದಲ್ಲಿ ಬುದ್ಧ ಬೋಧಿಸಿದ ಬಿಡುಗಡೆಯ ಹಾದಿಯನ್ನು ಒಪ್ಪಿಕೊಂಡು ಬಿಕ್ಷು ಆದರು. ವಿದ್ಯಾಭ್ಯಾಸ ಮುಂದುವರಿಸುತ್ತಲೇ ಬೌಧ ಬಿಕ್ಷುತ್ವ ಪಾಲಿಸಿದರು. ಆಮೇಲೆ .. ೧೯೮೩ರಲ್ಲಿ ಆಜಾನ್ ಬ್ರಹ್ಮರನ್ನ ಆಸ್ಟ್ರೇಲಿಯಾದ ಪರ್ತ್ ಶಹರಕ್ಕೆ ಕಳಿಸಲಾಯಿತು .. ಆಗ .. ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:12:03

Ask host to enable sharing for playback control

S1EP - 421 : ಸೀತಾನ್ವೇಷಣೆ | Story from Ramayana

2/29/2024
ರಾಮಾಯಣದ ಒಂದು ಸಂಧರ್ಭ ಇದು ಸೀತಾನ್ವೇಷಣೆಯಲ್ಲಿ ಶ್ರೀ ರಾಮಚಂದ್ರ ಸುಗ್ರೀವರ ಸಖ್ಯ ಆಗ್ತದೆ.. ರಾಮಚಂದ್ರ ಪ್ರಭುವಿನ ಪರಮ ಭಕ್ತ ಆಂಜನೇಯನೇ ಮೊದಲಾಗಿ ಸಾವಿರಾರು ವಾನರ ವೀರರು ಪ್ರಥ್ವಿಯ ಮೂಲೆ ಮೂಲೆಗಳಿಗೆ ಹೋಗಿ ಸೀತೆಯನ್ನ ಕಂಡು ಹಿಡಿಯಲಿಕ್ಕೆ ಪ್ರಯತ್ನಿಸುತ್ತಾರೆ .. ಆಮೇಲೇನಾಯ್ತು ? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:13

Ask host to enable sharing for playback control

S1EP - 420 :ಗುರು ಕಲಿಸಿದ ಪಾಠ | lessons from a saint

2/24/2024
ಒಂದಾನೊಂದು ಕಾಲದಲ್ಲಿ ಒಂದು ಬುದ್ಧ ವಿಹಾರ ಇತ್ತು. ಇಡೀ ದೇಶದಲ್ಲಿ ಹೆಸರಾಗಿದ್ದ ಮಠ ಅದು, ಆ ಮಠದ ಗುರು ಪರಮ ಜ್ಞಾನಿ ಆಗಿದ್ದ. ಇಡೀ ಮಠ ಎರಡು ಕಟ್ಟಡಗಳಲ್ಲಿತ್ತು. ಒಂದೊಂದು ವಿಭಾಗದಲ್ಲಿ ಐದುನೂರು ವಿದ್ಯಾರ್ಥಿಗಳಿದ್ರು. ಒಮ್ಮೆ ಒಂದು ಬೆಕ್ಕು ಇವರ ಮಠಕ್ಕೆ ಬಂತು ಆ ಬೆಕ್ಕು ಒಮ್ಮೆ ಒಂದು ಕಟ್ಟಡ ದಲ್ಲಿ ಇದ್ರೆ ಮತ್ತೊಂದಷ್ಟು ದಿನ ಇನ್ನೊಂದು ಕಟ್ಟಡದಲ್ಲಿರುತ್ತಿತ್ತು. ಎರಡೂ ಕಟ್ಟಡದಲ್ಲಿದ್ದವರಿಗೆ ಈ ಬೆಕ್ಕು ತಮ್ಮದಾಗಬೇಕೆಂಬ ಆಸೆ ಬಂತು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:07:39

Ask host to enable sharing for playback control

S1EP - 419 :ಯಾವುದು ನಿಜವಾದ ಧರ್ಮ | Meaning of Dharma

2/22/2024
ಬಹಳ ಚಂದದ ಒಂದು ಪ್ರಮೇಯ.ಧರ್ಮ ಎಂದರೇನು ಅಂತ ಯುದಿರಷ್ಟಿರ ಭೀಷ್ಮನನ್ನು ಪ್ರಶ್ನಿಸುತ್ತಾನೆ. ಪಿತಾಮಹ ರಕ್ಷಣೆಯನ್ನು ಅಪೇಕ್ಷಿಸಿ ಬಂದವರನ್ನು ಶತ್ರುವೇ ಆಗಿದ್ದರೂ ಹೇಗೆ ನಡೆಸಿಕೊಳ್ಳಬೇಕು? ಹೇಳಬಹುದೇ ಎಂದು ಕೇಳುತ್ತಾನೆ. ಅದಕ್ಕೆ ಭೀಷ್ಮರು ಒಂದು ಕಥೆ ಹೇಳುತ್ತಾರೆ ಯುಧಿಷ್ಠಿರ ಹಿಂದೆ ಭಗವಾನ್ ಪರಶುರಾಮ ಹೇಳಿದ ಕಥೆಯಿದು ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:07:22

Ask host to enable sharing for playback control

S1EP - 418 : ಜೀವನದ ಲಲಿತ ಕಲೆ | Art of living good life

2/17/2024
ಒಬ್ಬ ಯುವಕನಿಗೆ ಬದುಕಿಗೆ ಅರ್ಥವಿದೆಯಾ ಎಂಬ ಅನುಮಾನ ಬಂತು ಹಾಗಾಗಿ ಆತ ತಿಳಿದವರನ್ನು ಪ್ರಶ್ನಿಸಿದ. ಆದ್ರೆ ಉತ್ತರ ಸಿಗಲಿಲ್ಲ ತನ್ನ ಊರಿನಿಂದ ಪಕ್ಕದ ಊರಿಗೂ ಹೋಗಿ ಅದೇ ಪ್ರಶ್ನೆ ಕೇಳಿದ ಅಲ್ಲೂ ಉತ್ತರ ಸಿಗಲಿಲ್ಲ ಕೊನೆಗೊಂದು ದಿನ ಒಬ್ಬ ಸಾಧು ಯುವಕನಿಗೆ ಎದುರಾದ ಆಮೇಲೆನಾಯ್ತು? ಕೇಳಿ.ಡಾ. ಸಂಧ್ಯಾ. ಎಸ್. ಪೈ ಅವರ ಧ್ವನಿಯಲ್ಲಿ. ನಿಮ್ಮ ಸಲಹೆ ಹಾಗೂ ಅಭಿಪ್ರಾಯಗಳನ್ನು ಈ ಇಮೇಲ್ ವಿಳಾಸಕ್ಕೆ ಕಳುಹಿಸಿ - sandhyavanipodcast@gmail.com

Duration:00:06:47